ಚಂದ್ರ ತಾರೆಯ ತೋಟ.....

ಶನಿವಾರ, ಜುಲೈ 7, 2007 ·
ಚಂದ್ರ ತಾರೆಯರ ತೋಟಕೆ ಹೋಗಿ
ಅಲ್ಲಿ ಆಟವ ಆಡೋಣ
ಮೋಡದ ಮೇಲೆ ತೇಲುತ ನಾವು
ದೂರದ ತೀರಕೆ ಹೋಗೊಣ

ತಾರೆಗಳಂತೆ ಜಾರುತ ನಾವು
ಬೇರೆ ಲೋಕಕೆ ಹೋಗೊಣ
ಅಲ್ಲಿ ಸೂರ್ಯನ ಹುಡುಕಿ ನಾವು
ನಮ್ಮೂರ ಬೆಟ್ಟಕೆ ಕರೆತರೋಣ!

ಚಂದ ಮಾಮನ ಬೆಳ್ಳಿಯ ಬೆಳಕಲಿ
ನಲಿಯುತ ಊಟವ ಮಾಡೋಣ
ಚಲಿತ ಚಕೋರನ ಚಿಲಿ-ಪಿಲಿ ಹಾಡನು
ಮೌನದಿ ಮರೆಯಲಿ ಕೇಳೋಣ!

ಚುಕ್ಕಿಗಳಂತೆ ಮೋಡದ ಮರೆಯಲಿ
ಕಣ್ಣುಮುಚ್ಚಾಲೆ ಆಡೋಣ
ತಿಂಗಳ ಬೆಳಕಲಿ ತುಂಬಿದ ಚಂದಿರನಂತೆ
ಸಂತಸದಿಂದ ಕುಣಿದು ನಲಿಯೋಣ.

ಮಾಮನ ಊರಿಗೆ ಹೋಗುವ ಮೋಡಕೆ
ಗುಟ್ಟನು ಹೇಳಿ ಕಳಿಸೋಣ
ಅತ್ತೆ ಮಾಡಿದ ತುಪ್ಪದ ಹೋಳಿಗೆ
ನಮಗೂ ಕಳಿಸೆಂದು ಕೂಗಿ ಹೇಳೋಣ

ಅಮ್ಮ ಮಾಡಿದ ಉಂಡೆಯ ಕದ್ದು
ಚಂದ್ರ ತಾರೆಯರಿಗೆ ಹಂಚೋಣ
ಚಂದ ಮಾಮನ ಕಥೆಯನು ಕೇಳುತ
ನಿದ್ದೆಯ ಜಾಡನು ಹಿಡಿಯೋಣ.


ಕುಮಾರ ಸ್ವಾಮಿ.
ಪುಣೆ.
೧೪/೦೬/೦೭
| More

2 ಕಾಮೆಂಟ್‌(ಗಳು):

ಅನಾಮಧೇಯ ಹೇಳಿದರು...
ಆಗಸ್ಟ್ 10, 2007 07:13 ಅಪರಾಹ್ನ  

simply superb...!!!

ಅನಾಮಧೇಯ ಹೇಳಿದರು...
ಆಗಸ್ಟ್ 10, 2007 07:14 ಅಪರಾಹ್ನ  

simply superb...!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

 

SKY DASHBOARD | Copyright © 2009 - Blogger Template Designed By BLOGGER DASHBOARD